Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡಾ||ವಿ.ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿದರು ``ನಿರ್ಭಯ 2`` ಚಿತ್ರದ ಮೋಷನ್ ಪೋಸ್ಟರ್
Posted date: 27 Sun, Aug 2023 11:23:50 PM
ರೆತಿಕ್ಷ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಾಲಕೃಷ್ಣ ಕೆ.ಆರ್ ನಿರ್ಮಿಸಿರುವ, ರಾಜು ಕುಣಿಗಲ್ ನಿರ್ದೇಶನದ ಹಾಗೂ ಶ್ರಾವ್ಯ ರಾವ್ ಪ್ರಮುಖಪಾತ್ರದಲ್ಲಿ ನಟಿಸಿರುವ "ನಿರ್ಭಯ 2" ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ‌. ಖ್ಯಾತ ಗೀತರಚನೆಕಾರ ಡಾ||ವಿ.ನಾಗೇಂದ್ರಪ್ರಸಾದ್ 
ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. 

 ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶ್ರೀ ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ರವರು ಮಾತನಾಡಿ ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯ ಪ್ರಮುಖವಾಗಿ ಅತ್ಯಾಚಾರ ಈ ಎಲ್ಲಾ ಶೋಷಣೆಗಳು ಕಡಿಮೆಯಾಗಲಿ ಅಂತ್ಯವಾಗಲಿ ಎಂದು ಹರಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಶ್ರಾವ್ಯ ರಾವ್ (ಸಾತ್ವಿಕ) ತಾರಾಗಣದಲ್ಲಿ ಅರ್ಜುನ್ ಕೃಷ್ಣ, ಕುಸುಮ, ಹರೀಶ್ ಜಲೀಲ ಮುಂತಾದವರಿದ್ದಾರೆ. 
ತುಮಕೂರು, ಬೆಂಗಳೂರು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ  ನಡೆದಿದೆ‌.
  
 ಹೆಣ್ಣಿನ ಮೇಲಿನ ಶೋಷಣೆಗಳನ್ನು ತಡೆಯುವಂತ ಕಥಾಹಂದರವನ್ನು ಹೊಂದಿರುವ  ಈ ಚಿತ್ರಕ್ಕೆ ನಿರ್ದೇಶಕ ರಾಜು ಕುಣಿಗಲ್ ಅವರೆ ಕಥೆ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಪರ್ವ ಸಂಗೀತ ನೀಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡಾ||ವಿ.ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿದರು ``ನಿರ್ಭಯ 2`` ಚಿತ್ರದ ಮೋಷನ್ ಪೋಸ್ಟರ್ - Chitratara.com
Copyright 2009 chitratara.com Reproduction is forbidden unless authorized. All rights reserved.